ಇತ್ತೀಚೆಗಷ್ಟೇ ನೀಡಿದ ಸಂದರ್ಶನವೊಂದರಲ್ಲಿ ನಟಿ ದೀಪಿಕಾ ಪಡುಕೋಣೆ ಕನ್ನಡ ಚಿತ್ರವನ್ನು ನಿರ್ಲಕ್ಷ್ಯ ಮಾಡಿದ್ದರು. 'ಓಂ ಶಾಂತಿ ಓಂ' ಸಿನಿಮಾದ ಬಗ್ಗೆ ಮಾತನಾಡಿದ್ದ ದೀಪಿಕಾ ತಮ್ಮ ಮೊದಲ ಚಿತ್ರ 'ಐಶ್ವರ್ಯ' ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಅಲ್ಲದೆ ''ಓಂ ಶಾಂತಿ ಓಂ' ಚಿತ್ರಕ್ಕೂ ಮೊದಲು ನಾನು ಯಾವುದೇ ಸಿನಿಮಾ ಸೆಟ್ ಗಳಿಗೆ ಹೋಗಿರಲಿಲ್ಲ. ನನಗೆ ನಟನೆ ಮಾಡಿದ ಅನುಭವವೇ ಇರಲಿಲ್ಲ'' ಎಂದು ಹೇಳಿದ್ದರು. ದೀಪಿಕಾ ಅವರ ಈ ಹೇಳಿಕೆಗೆ ಅನೇಕರು ಕೋಪಗೊಂಡಿದ್ದಾರೆ. ಜೊತೆಗೆ ಫೇಸ್ ಬುಕ್ ನಲ್ಲಿ ಸಾಕಷ್ಟು ಜನ ತಮ್ಮ ಕಾಮೆಂಟ್ ಗಳ ಮೂಲಕ ದೀಪಿಕಾಗೆ ಬುದ್ದಿ ಕಲಿಸಿದ್ದಾರೆ.ದೀಪಿಕಾ ಸಂದರ್ಶನದ ವಿಡಿಯೋ ನೋಡಿ ''ನಿಮ್ಮ ಮೊದಲ ಸಿನಿಮಾ 'ಐಶ್ವರ್ಯ'' ಎಂದು ಫೇಸ್ ಬುಕ್ ನಲ್ಲಿ ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, ಕನ್ನಡೇತರರೂ ಕೂಡ ಇದೇ ರೀತಿ ಕಾಮೆಂಟ್ ಮಾಡಿದ್ದಾರೆ.